
6th September 2025
ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ಲಿಂಗೈಕ್ಯ ಪರಮಪೂಜ್ಯ ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ, ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಮೂರನೇ ದಿನ ಶುಕ್ರವಾರ ದಿನಾಂಕ: 5-9-2025 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಮುಂಜಾನೆ ಶ್ರೀಗುರು ಶಂಕರ ಲಿಂಗೇಶ್ವರ ಗುರುವರ್ಯರ ಮೂರ್ತಿಗೆ ಮಹಾರುದ್ರಾಭಿಷೇಕದ
ಪೂಜೆಯೊಂದಿಗೆ ಅಲಂಕಾರ ಮಾಡಲಾಯಿತು.
ಶ್ರೀ ಗುರು ಶಂಕರಲಿಂಗ ಶಿವಯೋಗಿಗಳ ಜಾತ್ರೆಯ ನಿಮಿತ್ಯ ಬೆಟ್ಟದಲ್ಲಿ ಸತತ 24 ತಾಸು ಭಜನೆ ಕಾರ್ಯಕ್ರಮದ ಉದ್ಘಾಟನೆಯು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಗುರು ಶಂಕರಲಿಂಗ ಮಠ ಹಿರೇಮನ್ನಾಪೂರದ ಗೌರವಾಧ್ಯಕ್ಷರಾದ ಹಾಗೂ ಧರ್ಮಾಧಿಕಾರಿಗಳಾದ ಬಾಲಚಂದ್ರಪ್ಪನವರು ಹಾಗೂ
ಸುರೇಶ ಸ್ವಾಮಿಗಳು, ವೀರಬಸಯ್ಯ ಸ್ವಾಮಿಗಳು,
ಕಳಕಪ್ಪ ಸೂಡಿ, ಶರಣಪ್ಪ ನೆರೆಬೆಂಚಿ, ಕಳಕಪ್ಪ ಪುರದ್, ಬಸವರಾಜ ಬಿದರಕುಂದಿ, ಫಕೀರಪ್ಪ ಈಳಗೇರ್, ಹುಸೇನ್ ಸಾಬ್ ಕೋಳೂರ್, ಶಿವಾನಂದ್ ಹಿರೇಮಠ ಹಾಗೂ ಇತರರಿದ್ದರು.
ಭೀಮಸೇನ್ ರಾವ್ ಕುಲಕರ್ಣಿ, ಜಿಎಂ ನ್ಯೂಜ್ ಕುಷ್ಟಗಿ.
ಶ್ರೀ ಗುರು ಶಂಕರಲಿಂಗ ಶಿವಯೋಗಿಗಳ ಜಾತ್ರೆಯ ನಿಮಿತ್ಯ 3ನೇ ದಿನದಂದು ಬೆಟ್ಟದಲ್ಲಿ ಸತತ 24 ತಾಸು ಭಜನೆಯ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಲಾಯಿತು.
ಹಿರೇಮನ್ನಾಪೂರ ಗ್ರಾಮದಲ್ಲಿ ಗುರುವಾರ ಎರಡನೇ ದಿನದ ಪುರಾಣ ಕಾರ್ಯಕ್ರಮ ಉದ್ಘಾಟನೆ
ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಕುರಿತು ಕುಷ್ಟಗಿ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ
ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ ಅಂಗವಾಗಿ ಮೊದಲನೇ ದಿನ ಪುರಾಣದ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಶ್ರೀಗಳವರಿಂದ ಚಾಲನೆ.
ಪರಮಪೂಜ್ಯ ಶ್ರೀ ಶಂಕರಲಿಂಗ ಗುರುವರ್ಯರ 41 ನೇ ಪುಣ್ಯತಿಥಿ, ಜಾತ್ರಾ ಮಹೋತ್ಸವ.
ಶ್ರೀ ಸಂಜೀವ ಜೋಶಿ ಅವರಿಂದ ಚಿಪ್ಪಗಿರಿಯ ತಪೋನಿಧಿ ಶ್ರೀ ವಿಜಯದಾಸರ ಸೇವಾ ಬಳಗದಲ್ಲಿ ಇಂದು 250ನೇ ನೇರ ಪ್ರಸಾರದ ಸಂಗೀತ ಕಾರ್ಯಕ್ರಮ